|| ಶ್ರೀ ರಾಘವೇಂದ್ರಸಕಲಪ್ರದಾತಾ ||

Posted: ಆಗಷ್ಟ್ 24, 2010 in ಅಲ್ಲಿ - ಇಲ್ಲಿ ಕಂಡದ್ದು

ಅದೆಲ್ಲೊ ಹಳೆಯ ಕೊಣೆಯೊಳಗಿಂದ ತೆಗೆದ ಆ ಪುರಾನಾ ಜಮಾನಾದ tape recorderru , ಆ ಜಂಗು ತಿಂದ Miku , ಅವೇ ದೋಡ್ಡಗಲದ Speekars ಗಳು , ಅಲ್ಲಲ್ಲಿ ಪಟ್ಟಿ ಹಚ್ಚಿ ಸುತ್ತಿದ Wire ಗಳು , ಇವನ್ನೆಲ್ಲ ತೆಗೆದು ಸ್ವಚ್ಚಗೋಳಿಸಿ ಅವುಗಲನ್ನು ಅವುಗಳ ಜಾಗಗಳಿಗೆ ಸಿದ್ದಪಡಿಸಿ ಇವತ್ತಿನ ಕೇಲಸ ಮುಗುಯಿತು ಅಂತ ಮನೆಯ ದಾರಿ ಹಿಡಿದಿದ್ದಾನೆ ನಮ್ಮ ಹನುಮಂತ. ಮತ್ತೆ ” ರಾಜ ಬೀದಿಯೋಳಗಿಂಗ ಕಸ್ತೂರಿ . . . ” ಅಂತ ಹಾಡಳು ಆ ಹಳೆಯ Tape Recorder ಸಿದ್ದವಾಗಿದೆ.

ಅಲ್ಲೇ Hall ದಲ್ಲಿ ಮುತಾಲಿಕ್ ಸತ್ ಮನೆತನದವರು ಕೊಟ್ಟ ಎಲ್ಲತರಹ ಕಾಯಿ ಪಲ್ಯೆಗಳು ಬಂದು ಬಿದ್ದಿವೆ.ಎಷ್ಟೊ ವರುಷಗಳಿಂದ ಈ ತರಹದ ಸೇವೆಯಲ್ಲಿ ತಮ್ಮನ್ನು ತೋಡಗಿಸಿಕೊಂಡಿರುವ ಆ ಮನೆತನಕ್ಕೆ ಎಲ್ಲರೂ ಮೆಚ್ಚಿಗೆಯನ್ನು ಆಗಲೇ ವ್ಯಕ್ತಪಡಿಸುತ್ತಿದ್ದಾರೆ . ಅಲ್ಲಿ ನೆರೆದಿದ್ದ ಎಲ್ಲರೂ ತಮ್ಮದೆ ಆದ ಲೋಕದಲ್ಲಿ ತಮ್ಮ ತಮ್ಮ ಭಾವಕ್ಕೆ ತಕ್ಕಂತೆ ಮಾತುಗಳನ್ನು ಶುರು ಹಂಚಿಕೊಂಡಿದ್ದಾರೆ.ಅಲ್ಲಿ ಊರಿನ ಎಲ್ಲ ಮಾತುಗಳು ವ್ಯಕ್ತವಾಗತೋಡಗಿವೆ.ಮನೆಯಲ್ಲಿನ ತಿಂಡಿಗಳಿಂದ ಹಿಡಿದು ರಾಯರ ಪೂಜೆವರೆಗೆ,ಮೊನ್ನೆ ಆದ ಮಳೆಯಿಂದ ಹಿಡಿದು ಮಕ್ಕಳ ಮುಂದಿನ ಭವಿಷ್ಯದ ವರೆಗೆ,ಊರಲ್ಲಿ ನಡೆಯುತ್ತಿರುವ ವಿಷಯಗಳಿಗೆ ಇವರುಗಳೆಲ್ಲ BBC News Reporter ಗಳಾಗಿ ಬಿಟ್ಟಿದ್ದಾರೆ.

ರಾಯರೆ ಹೇಗಾದರೂ ಮಾಡಿ ಈ ಸಾರಿ ಪರಿಕ್ಷೆಯಲ್ಲಿ ನನಗೆ ಒಳ್ಳೆ ಅಂಕಗಳು ಬರಲಿ ಅಂತಾ ಹೆಜ್ಜೆ ಸೇವೆಯನ್ನು ಆ ಕೆಂಪು ಚೂಡಿದಾರಿನ ಹುಡುಗಿ ಮಾಡುತ್ತಿದ್ದರೆ.ಮಗನಿಗೆ ಒಳ್ಳೆಯ ಕೇಲಸ ಸಿಗಲಿ ಅಂತ ಕಚ್ಚೆತೊಟ್ಟ ಆ ಹೆಂಗಸೂ ಸೇವೆಸಲ್ಲಿಸುತ್ತಿದ್ದಾಳೆ,  ಇನ್ನು ಕಳೆದ ಆರಾಧನೆಯಲ್ಲಿ ಬೇಡಿಕೊಂಡದ್ದು ಈಡೇರಿತು ಅಂತ ಕೇಲಒಬ್ರು ಉರುಳು ಸೇವೆಯನ್ನು ಮಾಡುತ್ತಿದ್ದಾರೆ ಅವರ ಹಿಂದೆ ಅವರ ಕುಟುಂಬದವರು ಸಹ ನಡೆಯುತ್ತಿದ್ದಾರೆ. ಕನಕದಾಸ ಕಂಬ ಮತ್ತು ಜಯ-ವಿಜಯ ಯ ಕಂಬದ ತುದಿಗೆ ಅಕ್ಕಿಯನ್ನೋ, ಹುಣಸೆ ಬೀಜವನ್ನೊ ಇಲ್ಲಾ ಕಲ್ಲುಗಲನ್ನು ಇಟ್ಟು ತಾವು ಇಷ್ಟು ಪ್ರದಕ್ಷಿಣೆಯನ್ನು ಹಾಕಿದೇವು ಅಂತಾ ಉಳಿದವರಿಗೆ ತೋರಿಸುತ್ತಿದ್ದಾರೆ ಒಂದಿಷ್ಟು ಜನ.ಇನ್ನು ಕೇಲ ಒಬ್ಬರು ರಾಯರ ಮುಂದೆ ಕೂತು ಭಕ್ತಿಯಿಂದ ಕಣ್ಣು ಮುಚ್ಚಿ ರಾಯರನ್ನು ನೇನೆಯುವ ದೃಷ್ಯ ಸಾಮಾನ್ಯವಾಗಿ ಕಂಡು ಬರುತ್ತವೆ.

ಮಧ್ವಾಚಾರರ ಮುಂದೆ ನಿಂತ ಕೃಷ್ಣನ ಪಾದಗಳು ಸವೆದುಹೋಗಿವೆ , ಬಂದ ಭಕ್ತಾದಿಗಳಿಗೆ ಮೋದಲು ಕಾಣುವುದೆ ಮಧ್ವಾಚಾರರು ಒಲೇಸಿಕೊಂಡ ಕೃಷ್ಣನ ಕಲಾಕೃತಿ ಅದಕ್ಕೆ ರಾಯರ ಮಠಕ್ಕೆ ಬಂದವರೆಲ್ಲ ಕೃಷ್ಣನ ಪಾದಗಳೇಂದರೆ ಪಂಚಪ್ರಾಣ ಅದನ್ನು ಮುಟ್ಟಿ ಮುಟ್ಟಿ ನಮಸ್ಕರಿಸಿದ್ದೆ ನಮಸ್ಕರಿಸಿದ್ದು.ಹೀಗೆ ಭಕ್ತರ ಭಕ್ತಿ ಸ್ವಿಕರಿಸಿ ಸ್ವಿಕರಿಸಿ ಕೃಷ್ಣನ ಪಾದಗಳು ಸವೆದುಹೋದಹಾಗೆ ಗೋಚರಿಸುತಿದೆ ಆ ಕಲಾಕೃತಿ.ಎಷ್ಟೊ ವರುಷಗಳಾದರೂ ಮರು Painting ಕಾಣದ ಆ ಕಲಾಕೃತಿ ನೋಡಿದಾಗಲೂ ಮನ ಕರಗುತ್ತೆ.ಏನು ಮಾಡೋದು ಕೃಷ್ಣನಿಗೆ ಬೇಡವಾಗಿರಬಹುದು ಅದಕ್ಕೆ ಬಿಟ್ಟಿದ್ದಾನೆ ಅಂತ ಹಿರಿಯರ ಮಾತುಗಳು ಕಿವಿಗಳಿಗೆ ಬಿಳುತ್ತಿವೆ ಮಠದ ಆವರಣದಲ್ಲಿ.

ನಾನು ಪುಷ್ಪಗಳಿಂದ ರಾಯರ ಬೃಂದಾವನವನ್ನು  ಅಲಂಕರಿಸಿದ್ದಾರೆ ಆಚಾರ ಶ್ರೇಷ್ಟರುಗಳು,ಗುಲಾಬಿ ಹೂಗಳ ಪರಿಮಳ,ಸೇವಂತಿಯ ಸುಗಮ,ದಾಸವಾಳದ ಅಂದ,ಮಲ್ಲಿಗೆಯ ಕಂಪು,ಡೇರೆ ಹೂಗಳ ಮಾಲೆ, ಅಕ್ಕಪಕ್ಕದಲ್ಲಿ ಕೇದಿಗೆಯ ಸುಗಂಧ ಇವೆಲ್ಲವುಗಳಿಗೆ ಕಲಷವಾಗಿರುವಂತೆ ರಾಯರ ಪ್ರೀಯ ತಿಳಸಿ ಎಲ್ಲವೂ ಸೇರಿ ರಾಯರನ್ನು ಇನ್ನು ಚೆಂದ ಗೊಳಿಸಿವೆ.ಪಕ್ಕದಲ್ಲಿ ಕೂತ ಮುಖ್ಯಪ್ರಾಣದೇವರು ರಾಯರಿಗೆ ಮನ:ಪೂರ್ವಕವಾಗಿ ನಮಿಸುತ್ತಿದ್ದಾನೆ.ಸ್ವಚ್ಚವಾಗಿ ಕಂಗಳೀಸುತ್ತಿರುವ ಎರಡೂ ನಿಲಾಂಜನದ ಬೇಳಕುಗಳು ರಾಯರನ್ನು Spotlight ಬೇಳಕಿನಲ್ಲಿ ಇರುವಂತೆ ಮಾಡಿ ಆ ಈಡಿ ಗರ್ಭಗುಡಿಯನ್ನು ಆಕರ್ಷಿಸುವಂತೆ ಮಾಡಿವೆ.

ಇಂಥಾ ಗರ್ಭಗುಡಿಯ ಮುಂದೆ ರಾಮಚಾರ ಆಚಾರರ  ಮಂತ್ರಪುಷ್ಪದ ಸೇವೆ ನಡೆದಿದ್ದರೆ ಅವರ ಜೋರೆತೆ ಧ್ವನಿಗೂಡಿಸಲು ಹಲವಾರು ಪುಟ್ಟ ಪುಟ್ಟ ಮಕ್ಕಳೂ ಸಹ ನೇರೆದಿದ್ದಾರೆ ಇದು ಆ ಮಕ್ಕಳುಗಳಿಗೆ ಕಿರು ಪರಿಕ್ಷೇ ಥರಹ ಗೋಚರವಾಗುತ್ತಿದೆ.ಅವರಲ್ಲಿ ಕುಳಿತ ಒಬ್ಬ ಹುಡೂಗನಿಗೆ ಒಂದಿಷ್ಟು ಮಂತ್ರಗಳು ಪ್ಪುಸ್ತಕದಲ್ಲಿ ಕಾಣಸಿಗದಾಗಿದೆ ಅದಕ್ಕೆ ಅವನು ಪದೇ ಪದೇ ಪುಟಗಳನ್ನು ತಿರುವಿ ತಿರುವು ಹಾಕುತ್ತಿದ್ದಾನೆ ಆಗ ಪಕ್ಕದಲ್ಲಿದ್ದ ನಡುವಯಸ್ಸಿನ ಒಬ್ಬ ಯುವಕ ಅವನಿಗೆ ಎಲ್ಲಿದೆ ಅಂತಾ ತೋರಿಸಿಕೊಡುತ್ತಿದ್ದಾನೆ.ಇವರೆಲ್ಲರನ್ನು ದೂರದಿಂದ ನೋಡುತ್ತಿದ್ದ ಇನ್ನೊಬ್ಬ ಯುವಕ ಛೇ! ನಾನು ರಾಯರಿಗೆ ಈ ತರಹದ ಸೇವೆ ಮಾಡಲೇ ಇಲ್ಲಾ ಅಂತ ಬೇಜಾರಿನಿಂದ ರಾಯರಿಗೆ ನಮಿಸುತ್ತಿದ್ದಾನೆ.

ಮಠದ ಆವರಣ ಹಿಂದಿನ ಪಾಕಶಾಲೆಯಲ್ಲಿ ಎಲ್ಲಿಲ್ಲದ ಯುವಕರು ಸೇರಿದ್ದಾರೆ . ಅವರೆಲ್ಲ ಪ್ರಸಾದ ಸೇವೆಯುನ್ನು ಪ್ರತಿಸಲದಂರೆ ಈ ಸಾರಿನೂ ತಪ್ಪಿಲ್ಲದೆ ಮಾಡಲು ಮುಂದಾಗಿದ್ದಾರೆ.ಒಂದಷ್ಟೂ ಯುವಕರು ಹೋರಗಡೆಗೆ ನಿಂತು ತಮ್ಮದೆ ಆದ ರಿತಿಯಲ್ಲಿ ಒಬ್ಬನ್ನೊಬ್ಬರು ಛೇಶಿಸುತ್ತಾ ನಡೆದ ಸೇವೆಯಲ್ಲೆ ಮಜಾ ಮಾಡುತ್ತಿದ್ದಾರೆ.ಅವರಲ್ಲಿ ಒಂದಿಬ್ಬರ ಪಂಚೆಯ ಸಂದಿಯಲ್ಲಿ ಪ್ಲಾಸ್ಟಿಕ್ ರೀತಿಯ ಒಂದು ಪುಡಕೆ ಕಾಣುತ್ತಿದೆ ಅದೇನು ಅಂತಾ ಪ್ರಷ್ಣೆ ಮಾಡುವರು ಅಲ್ಲಿ ಯಾರು ಇಲ್ಲದ ಕಾರಣ ಅದನ್ನು ಮರೆತುಬಿಟ್ಟಿದ್ದಾರೆ.ಹೊತ್ತಿ ಉರಿಯುತ್ತಿರುವ ಒಲೆಗಳ ಮೇಲೆ ಪ್ರಸಾದಕ್ಕೆ ಬೇಕಾದ ಎಲ್ಲ ರೀತಿಯ ರಯಾರಿಗಳು ಭರದಿಂದ ಸಾಗಿವೆ.ಇವನ್ನೆಲ್ಲ ಅಚ್ಚು ಕಟ್ತಾನಿ ನಿಭಾಯಿಸಲು ನಮ್ಮ ಜೋಷಿ ಸರು ನಿಂತುಬಿಟ್ಟಿದ್ದಾರೆ ಎಲ್ಲಿ ಏನೇ ತಪ್ಪಾಗಲಿ ಅದನ್ನು ಹೇಗೆ ಸರಿಪಡಿಸುವುದು ಅಂತಾ ಅವರಿಗೆ ಗೊತ್ತು ಅವರು ರಾಯರ ಕೇಲಸ ಅಂದ್ರೆ ಅದು ದೇವರ ಕೇಲಸ ” ಕಾಯಕವೇ ಕೈಲಾಸ ” ಅಂತ ಭಾವಿಸಿ ತುಂಬಾ ಮನ: ಪೂರ್ವಕವಾಗಿ ನಿಭ್ಹಾತಿಸುತ್ತಿದ್ದಾರೆ.ಅವರಿಗೆ ರಾಯರ ಆರಾಧನೆ ಆಗಲಿ ಅಥವಾ ಮಠಕ್ಕೆ ಸಂಭಂದಿಸಿದ ಯಾವಿದೆ ಕಾರ್ಯಕಳಲ್ಲಿ ಎಷ್ಟು ಆಸಕ್ತಿ ಎಂದರೆ ಒಮ್ಮೆ ಶಾಲೆಯಲ್ಲಿ ಒಬ್ಬ ಹುಡುಗನಿಗೆ ಬೈದು ಬಿಟ್ಟಿದ್ದರು ಈ ಸಾರಿ ಯಾರು ಮನೆಗೆಲಸ ಮಾಡಿಕೊಂಡು ಬರುವುದಿಲ್ಲವೋ ಅವರಿಗೆ ಆರಾಧನೆಯಲ್ಲಿ ಊಟ ಇಲ್ಲ ಅಂತಾ . .ಇಷ್ಟು ಸಲಗೆಯನ್ನು ಜೋಷಿ ಸರು ತಮ್ಮದಾಗಿಸಿಕೊಂಡಿದ್ದಾರೆ . ಇಂಥಹ Dedication ಅವರಲ್ಲಿ ಮಾತ್ರ ಎದ್ದು ಕಾಣುತ್ತಿದೆ.

ರಥೋತ್ಸವಕ್ಕೆಂದೆ ಸಾವಿರ ಸಾವಿರ ಜನರು ಬಂದು ಸೇರಿದ್ದಾರೆ ಊರಿನ ಜನ ಮಾತ್ರ ಬರದೇ ದೇಶದ ಮೂಲೆ ಮೂಲೆಗಳಿಂದ ಬಂದ ಜನಗಳೂ ಕಾಣ ಸಿಗುತ್ತಿದ್ದಾರೆ ಅವರುಗಳಿಗೆ ಇದು ಒಂದು ವರ್ಷದ Routine ಆಗಿ ಹೋಗಿದೆ.ವರ್ಷಕ್ಕೆ ಒಂದು ಸಾರಿ ಬಂದು ರಾಯರ ಸೇವೆ ಸಲ್ಲಿಸಿ ಹೋಗಬೇಕು ಅಂತ . ಅದು ದೂರದ ಮುಂಬೈಯಿಂದ ಬಂದ ಮನೋಹರ ಜೋಷಿ ಇರಬಹುದು ಇಲ್ಲಾ ಕುಟುಂಬದ ಸಮೇತ ಬಂದ ಬೇಂಗಳೂರಿನ ಉಮೇಶ್ ನಾಯಕ್ ಮಾಮಾ ಇರಬಹುದು ಇಲ್ಲಾ ವಾಪಿ ಯಿಂದ ಬಂದ ಮಂದಾಕಿನಿ ಕಾಕು ಇರಬಹುದು . ಹೌದು ರಾಯರು ತಮ್ಮ ಭಕ್ತರನ್ನು ಎಲ್ಲಿಗೆ ಬೇಕಾದರಲ್ಲಿ ಕರೆಸಿಕೊಳ್ಳುತ್ತಾರೆ ಅನ್ನೊದಕ್ಕೆ ಇದೇ ಸಾಕ್ಶಿ.ಊಳಿಗದ ಆಧಾರದ ಮೇಲೆ ಊರನ್ನು ತೋರೆದವರು ವರ್ಷಕ್ಕೆ ಒಮ್ಮೆಯಾದರೂ ಊರಿಗೆ ಬಂದು ಹೋಗಬೇಕು ಇಂಥಹ ಒಂದಿಷ್ಟು ಕಾರ್ಯಕ್ರಮಗಳು ನೇರವಾಗುತ್ತವೆ.

ಇನ್ನು ಅನೇಕಾನೆಕ ವಿಷಯಗಳು ರಾಯರ ಆರಾಧನೆಯ ಜೋತೆಗೆ ಸೇರಿಕೊಂಡಿವೆ ಅದು ಪ್ರಸಾದ ಸೇವೆಯನ್ನು ಸಲ್ಲಿಸುತ್ತಿರುವಾಗ ಮಳೆ ಆಗಬಾರದೆಂದು ಕಾಯಿ ಓಡೆಯಿತ್ತಿರುವ ಆಚಾರರು ಇರಬಹುದು ಇಲ್ಲಾ  ಭೀಮದಾಸರ ಪೋಟೊದ ಬಾಡಿದ ಮಾಲೆಯನ್ನು ತೆಗೆಯುತ್ತಿರುವ ಅವರ ಮೊಮ್ಮಗ ಇರಬಹುದು ಇಲ್ಲಾ Store Room ನಲ್ಲಿ ಅಕ್ಕಿಯ ಚೀಲಗಳನ್ನು ಏಣಿಸಿ ಏಣಿಸಿ ಕೊಡುತ್ತಿರುವ ಆ ವೃದ್ದ ಇರಬಹುದು ಇಲ್ಲಾ office ನಲ್ಲಿ Account ಅನ್ನು ತಪ್ಪು ಇಲ್ಲದೇ ಮಾಡುತ್ತಿರುವ ಮುತಾಲಿಕ್ ಕಾಕಾ ಇರಬಹುದು ಇಲ್ಲಾ ಇವತ್ತಿನ ಸಂಗೀತಸೇವೆಯಲ್ಲಿ ಗಣೇಶನ ಹಾಡಿನೊಂದಿಗೆ ಸಂಗೀತ ಕಾರ್ಯಕ್ರಮ ಪ್ರಾರಂಭ ಮಾಡಬೇಕು ಅಂತ ತಮ್ಮ ಮಾವನೋಡನೆ ಮಾತಾಡುತ್ತಿರುವ ಥೀಟೆ ಭಗಿನಿ ಇರಬಹುದು, ಇಲ್ಲಾ ಹೋರಗೆ ಟೆಂಗಿನಕಾಯಿ  ಕೆಟ್ಟಿದ್ರ ವಾಪಸ್ ತೊಂಗೊಂಡ ಬರ್ರಿ ರೊಕ್ಕಾ ಕೊಡತೀನಿ ಅಂತ ಹೇಳ್ತಾ ಇದ್ದ ಆ ಹುಡುಗ ಇರಬಹುದು.

ಇಂಥಾ ನೂರಾರು ಸೂಕ್ಷ್ಮ ಸಂಕುಲನಗಳಿಂದ ಕೂಡಿದ ನಮ್ಮ ಆರಾಧನೆ ಈ ಸಾರಿನೂ ಬಂದಿದೆ ಈ ಸಾರಿ ನಾವೆಲ್ಲ ಭಕ್ತಿ ಪೂರ್ವಕವಾಗಿ ರಾಯರಿಗೆ ತನು ಮನ ಧನಗಳಿಂದ ಸೇವೆ ಸಲ್ಲಿಸಿ ರಾಯರ ಕೃಪೆಗೆ ಪಾತ್ರರಾಗಬೇಕಿದೆ.ಇನ್ನೂ ಕೇಳಿದ ವರಗಳನ್ನು ಕೊಡುವ ರಾಯರು ಇಲ್ಲಿಯವರೆಗೆ ಯಾರಿಗೂ ಕೇಡನ್ನು ಮಾಡಿಲ್ಲ ಅದಕ್ಕೆ ಅವರಿಗೆ ” ಶ್ರೀ ರಾಘವೇಂದ್ರ ಸಕಲ ಪ್ರದಾತಾ ” ಅಂತ ಅನ್ನೊದು.ಬನ್ನಿ ಈ ಸಾರಿ ಇಂಥಾ ಎಲ್ಲ ಎಲ್ಲ ಸೂಕ್ಷ್ಮತೆಗಳನ್ನು ಸವಿದುಕೊಂಡು ರಾಯರ ಸೇವೆಗೆ ಪಾತ್ರರಾಗೋಣ.

Advertisements
ಟಿಪ್ಪಣಿಗಳು
  1. sameer shirur ಹೇಳುತ್ತಾರೆ:

    Great article dude!!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s